ಒಕ್ಕಲು ಜಮೀನು (ಕೃಷಿಕ್ಷೇತ್ರ, ಹೊಲ, ಗದ್ದೆ) ಪ್ರಧಾನವಾಗಿ ಕೃಷಿ ಪ್ರಕ್ರಿಯೆಗಳಿಗೆ ಮೀಸಲಿಡಲಾದ ಭೂಪ್ರದೇಶ. ಆಹಾರ ಮತ್ತು ಇತರ ಬೆಳೆಗಳನ್ನು ಉತ್ಪಾದಿಸುವುದು ಇವುಗಳ ಪ್ರಧಾನ ಉದ್ದೇಶವಾಗಿದೆ; ಆಹಾರ ಉತ್ಪಾದನೆಯಲ್ಲಿ ಇದು ಮೂಲಭೂತ ಸೌಕರ್ಯವಾಗಿದೆ. ಈ ಪದವನ್ನು ವಿಶೇಷೀಕೃತ ಘಟಕಗಳಿಗೆ ಬಳಸಲಾಗುತ್ತದೆ, ಉದಾಹರಣೆಗೆ, ಕೃಷಿಯೋಗ್ಯ ಜಮೀನು, ತರಕಾರಿ ಜಮೀನುಗಳು, ಹಣ್ಣಿನ ಜಮೀನುಗಳು, ಮತ್ತು ನೈಸರ್ಗಿಕ ನಾರುಗಳು, ಜೈವಿಕ ಇಂಧನಗಳು ಮತ್ತು ಇತರ ದ್ರವ್ಯಗಳ ಉತ್ಪಾದನೆಗೆ ಬಳಸಲಾದ ಜಮೀನು. ಈ ಪದವು ಜಾನುವಾರು ಕ್ಷೇತ್ರಗಳು, ಗೋಮಾಳಗಳು, ಹಣ್ಣುತೋಟಗಳು, ನೆಡುತೋಪುಗಳು ಹಾಗೂ ಎಸ್ಟೇಟುಗಳು, ಸಣ್ಣ ಜಮೀನುಗಳು ಹಾಗೂ ಹವ್ಯಾಸ ಜಮೀನುಗಳು, ಮತ್ತು ತೋಟದ ಮನೆ ಹಾಗೂ ಕೃಷಿ ಕಟ್ಟಡಗಳನ್ನು ಒಳಗೊಳ್ಳುತ್ತದೆ. == ಒಕ್ಕಲು ಜಮೀನುಗಳ ಪ್ರಕಾರಗಳು == ಒಕ್ಕಲು ಜಮೀನು ಒಬ್ಬನೇ ವ್ಯಕ್ತಿ, ಕುಟುಂಬ, ಸಮುದಾಯ, ನಿಗಮ ಅಥವಾ ಕಂಪನಿಯ ಒಡೆತನದಲ್ಲಿರಬಹುದು ಮತ್ತು ನಿರ್ವಹಿಸಲ್ಪಡಬಹುದು. ಒಕ್ಕಲು ಜಮೀನು ಒಂದು ಅಥವಾ ಹಲವು ಪ್ರಕಾರಗಳ ಬೆಳೆಗಳನ್ನು ಉತ್ಪಾದಿಸಬಹುದು, ಮತ್ತು ಹೆಕ್ಟೇರಿನ ಅಲ್ಪಭಾಗದಿಂದ ಹಿಡಿದು ಹಲವು ಸಾವಿರ ಹೆಕ್ಟೇರುಗಳವರೆಗೆ ಯಾವುದೇ ಗಾತ್ರದ ಹಿಡುವಳಿಯಾಗಿರಬಹುದು. == ಉಲ್ಲೇಖಗಳು ==